Kumaravyasa Bharata!

ಸೂ: ರಿಪುಕುಮಾರ ಕುಠಾರ ಧೀರನು ಚಪಳ ನೃಪಸಂಹಾರ ಕಾಲನು ವಿಪುಳ ಸಂಗ್ರಾಮದಲಿ ಮಡಿದನು ಫಲುಗುಣನ ತನಯ ಮೇರೆದಪ್ಪಿತು ಕೌರವನ ಪರಿ ವಾರದಲಿ ಬೇಹವರು ಮಕುಟದ ಬಾರಿಯಾಳುಗಳಾಂತುಕೊಂಡರು ಪಾರ್ಥನಂದನನ ಸೂರಿಯನಸುತ ಶಲ್ಯ ಗೌತಮ ಕೌರವಾನುಜನುಭಯ ಕಟಕಾ ಚಾರ್ಯನಶ್ವತ್ಥಾಮನಿವರೊಗ್ಗಾಯ್ತು ಷಡುರಥರು ೧ ಹೊಳೆವ ಸಿಂಧದ ಜಡಿವ ಕಹಳಾ ವಳಿಯ ಲಗ್ಗೆಯ ವಿವಿಧ ವಾದ್ಯದ ಕಳಕಳದ ಕಾಲಾಳ ಬೊಬ್ಬೆಯ ಬಹಳ ರಭಸದಲಿ ಕಲಶ ಪಲ್ಲವ ಚೌಕದಲಿ ಮಂ ಡಳಿಸಿದವು ಸತ್ತಿಗೆಗಳೊದರುವ ಕೆಲಬಲದ ಶಂಖಾಳಿಯಲಿ ಸಂದಣಿಸಿತತಿರಥರು ೨ ಅಳವಿಗೊಟ್ಟುದು ಮತ್ತೆ ಕೌರವ ಬಲಪಯೋನಿಧಿ ವೈರಿ ಬಡಬನ ಬಿಲು ಸರಳು ಬಿರುಗಿಡಿಯಲೌಕಿತು ಚಾತುರಂಗದಲಿ ಎಲೆಲೆ ಬೆಂಗಾಹಿನಲಿ ನೂಕುವ ಬಲ ಸಮರ್ಥರ ಜೋಕೆಯಲಿ ಕುರು ಬಲಕೆ ಕದನಾಳಾಪವಾಯ್ತೆನುತೆಚ್ಚನಭಿಮನ್ಯು ೩

Anirudh M

Computer “Scientist” at Adobe. Developer Productivity, Philosophy & Thoughts. Views are very personal